Namma Ooru Namma Itihasa – Our village Our History

 • ನಿಮಗೆ ನಿಮ್ಮ ಊರಿನ ಬಗ್ಗೆ ಹೆಮ್ಮೆ ಇದೆಯೇ?
 • ಅದರ ಚರಿತ್ರೆ, ಇತಿಹಾಸ, ಜನಪದ , ಸಂಸ್ಕೃತಿಯ ಬಗ್ಗೆ ಅರಿವಿದೆಯೇ?
 • ನಿಮ್ಮ ಮನೆತನ, ನಿಮ್ಮ ಹುಟ್ಟೂರು, ನೀವಿರುವ ಊರು, ನಿಮಗಿಷ್ಟವಾದ ಊರಿನ ಬಗ್ಗೆ, ಅದರ ಇತಿಹಾಸ, ಸಂಸ್ಕೃತಿ, ಜನಪದ ಆಚರಣೆಗಳನ್ನು ಹೊರಜನರಿಗೆ ತಿಳಿಯಪಡಿಸುವ ಅಪೇಕ್ಷೆ ಇದೆಯೇ?

ಹಾಗಾದರೆ, ಇಲ್ಲಿದೆ ಸದಾವಕಾಶ !

ಕರ್ನಾಟಕ ಇತಿಹಾಸ ಅಕಾಡೆಮಿಯು “ನಮ್ಮ ಊರು, ನಮ್ಮ ಇತಿಹಾಸ” ಎಂಬ ಮಹತ್ವದ ಯೋಜನೆಯನ್ನು ಪ್ರಾರಂಭಿಸಿದೆ. ನಮ್ಮ ನಾಡಿನ ಪ್ರತಿ ಹಳ್ಳಿಯ ಜಾನಪದ, ಸಾಂಸ್ಕೃತಿಕ , ಐತಿಹಾಸಿಕ , ಧಾರ್ಮಿಕ ಮಹತ್ವವನ್ನು ಸಚಿತ್ರ ವಿವರಣೆಗಳೊಂದಿಗೆ ಸಂಯೋಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಜನ ಸಾಮಾನ್ಯರಲ್ಲಿ ತಮ್ಮ ಊರಿನ ಬಗ್ಗೆ ನೆನಪಿರುವ ಕಥೆಗಳು, ಚರಿತ್ರೆ, ತಿಳುವಳಿಕೆಗಳನ್ನು ದಾಖಲಿಸುವ ಪ್ರಯತ್ನ ಇದಾಗಿದೆ. ಕೆಳಗೆ ಕೊಟ್ಟಿರುವ ಅದಷ್ಟೂ ಮಾಹಿತಿಗಳೊಡನೆ ತಮ್ಮ ಲೇಖನವನ್ನು ooru.itihasa@gmail.com  ಇಲ್ಲಿಗೆ ಕಳುಹಿಸಿಕೊಡಿ. ಇಲ್ಲವೇ ಕೆಳಗಿನ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಿಕೊಡಿ.

ಕರ್ನಾಟಕ ಇತಿಹಾಸ ಅಕಾಡೆಮಿ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ, 3ನೇ ಮುಖ್ಯರಸ್ತೆ, ನರಸಿಂಹರಾಜಾ ಕಾಲೋನಿ, ಬೆಂಗಳೂರು – 560 019

೧. ಊರಿನ ಹೆಸರು, ಹೋಬಳಿ, ತಾಲೂಕು, ಜಿಲ್ಲೆ

೨.  ತಾಲೂಕು ಕೇಂದ್ರದಿಂದ ದೂರ

೩. ಸ್ಥಳ ನಿರ್ದೇಶನ, ಮ್ಯಾಪ್, ಸಾರಿಗೆ ಸಂಪರ್ಕ

೪. ಸ್ಥಳೀಯ ಚರಿತ್ರೆ

೫. ಐತಿಹ್ಯ

೬. ಪುರಾಣದ ಕಥೆ

೭. ಜನಪದ ಕಥೆಗಳು

೮. ಪ್ರಾಚ್ಯಾವಶೇಷಗಳು

೯. ದೇವಾಲಯಗಳು, ವಿಗ್ರಹಗಳು

೧೦. ದೇವಾಲಯಗಳ ನಕ್ಷೆ, ವಾಸ್ತು

೧೧. ಶಾಸನಗಳು

೧೨. ವೀರಗಲ್ಲು, ಮಾಸ್ತಿಕಲ್ಲುಗಳು

೧೩. ವಸತಿ ವ್ಯವಸ್ತೆ

೧೪. ಛಾಯಾ ಚಿತ್ರಗಳು

೧೫. ಮಾಹಿತಿ ನೀಡಿದವರ / ಸಂಪನ್ಮೂಲ ವ್ಯಕ್ತಿಗಳ ಹೆಸರು

೧೬. ದೂರವಾಣಿ ಸಂಖ್ಯೆ

೧೭. ಈ ಮೇಲ್

೧೮. ಗ್ರಂಥ ಋಣ , ಟಿಪ್ಪಣಿಗಳು , ಉಲ್ಲೇಖಗಳು , ಅಂತರ್ಜಾಲ ಕೊಂಡಿ

ಪ್ರತಿ ಲೇಖನವನ್ನು ಅಕಾಡೆಮಿಯ ಇತಿಹಾಸ ತಜ್ಞರು ಪರಿಶೀಲಿಸುತ್ತಾರೆ.  ಮಾಹಿತಿಯ ನಿಖರತೆಯ ಆಧಾರದ ಮೇಲೆ ಲೇಖನಗಳನ್ನು ಆಯ್ಕೆ ಮಾಡಲಾಗುತ್ತದೆ. ಲೇಖಕರ ಹೆಸರನ್ನು ನಮೂದಿಸಲಾಗುತ್ತದೆ.

ಮಾದರೀ ಲೇಖನ


Here is an opportunity for you to explore where you are from, which part of our state you belong to and what is the historical significance of your birthplace or home town.

The Academy has undertaken the task of creating database of all villages, towns across Karnataka under the project titled ‘Namma Ooru Namma Itihasa’ – “Our Village Our History”

The objective of this project is to record for posterity a curated, visual and narrative based archive that traces the social, cultural, historical and religious significance of one’s village or town. This will be a record of the history of different places as experienced and remembered by individual members of the society.

If you are already aware of the historical significance of your birth place or ancestral village, or the village/town/locality you live in, or a place you have visited, please do share the story with photographs. Article can be written in Kannada or English. Please email the write up to

ooru.itihasa@gmail.com

Please try to include the following facts about the place when writing the article.

 1. Name of the place – Grama, Hobli, Taluk, District
 2. Distance from Taluk Center/Nearest Town
 3. How to reach, mode of transportation, if possible include map and distances
 4. Local history
 5. Any Purana/Mythological stories associated with the place
 6. Folk tales of the place
 7. Pre-Historic ( Stone Age ) tools, rocks, drawings, dolmens in the area
 8. Old temple, sculptures, idols
 9. Temple drawing, architectural details
 10. Hero stones
 11. Inscriptions
 12. Any historical heritage structures in conditions that require immediate attention from the authorities.
 13. Lodging Facility (reasonable hotels to stay)
 14. Photos with good resolution
 15. Resource person/contact person who knows he locality/history
 16. Your phone number
 17. Your email address
 18. Credits: Reference books, articles, research papers, internet links

All entries will be reviewed by Historians of repute from the Academy. The Academy reserves the right to publish selected narratives after editing for clarity, length and historical accuracy. The contributors of the selected narratives would be duly acknowledged.

Advertisements

25 responses to “Namma Ooru Namma Itihasa – Our village Our History

 1. ಮಾನ್ಯರೆ, ನಮ್ಮ ಪೂರ್ವಿಕರು ತೊರೆನಾಡಿನ ಕಾರುಗಹಳ್ಳಿ ಎಂಬ ಊರಿನವರಾಗಿದ್ದು, ಅಲ್ಲಿನ ಪಾಳೆಯಗಾರರಾಗಿದ್ದ ಮಾರನಾಯಕನ ವಂಶಸ್ಥರೆಂದು ಇಂದಿಗೂ ಗುರುತಿಸಿಕೊಳ್ಳುತ್ತಿದ್ದಾರೆ. ಮೈಸೂರು ಅರಸರ ಜೊತೆಗಿನ ಯುದ್ಧದ ನಂತರ ಗ್ರಾಮವನ್ನು ತೊರೆದುದಾಗಿ ಹೇಳುತ್ತಾರೆ. ಈ ಬಗ್ಗೆ ಕುತೂಹಲಗೊಂಡ ನಾನು ಕಾರುಗಹಳ್ಳಿ ಗ್ರಾಮದ ಬಗ್ಗೆ ಹಲವಾರು ವರ್ಷಗಳಿಂದ ವಿವಿಧ ಮೂಲಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಿ ಕೊನೆಗೆ ಅದು ಇರುವ ಸ್ಥಳವನ್ನು ಪತ್ತೆ ಮಾಡಿದೆ. ಕಾರುಗಹಳ್ಳಿಯೂ ಬೇಚರಾಕ್ ಗ್ರಾಮವಾಗಿದ್ದು ಮೈಸೂರಿನ ಚಾಮುಂಡಿಬೆಟ್ಟದ ದಕ್ಷಿಣ ಭಾಗದಲ್ಲಿರುವ ಉತ್ತನಹಳ್ಳಿ (ಸರ್ಕಾರಿ ಉತ್ತನಹಳ್ಳಿ) ಎಂಬ ಗ್ರಾಮದ ಜಮೀನುಗಳ ಮಧ್ಯೆ ಇರುವುದು ಕಂಡುಬಂತು. ಈಗಲೂ ಅಲ್ಲಿ “ಕಾರುಗಳ್ಳಿಯಮ್ಮ” ಎಂಬ ದೇವತೆಯ ಗುಡಿಯಿದೆ. ಅಲ್ಲದೆ ಸ್ಥಳೀಯರು ಆ ಪ್ರದೇಶವನ್ನು ‘ಕಾರುಗಹಳ್ಳಿ ಕಾವಲು’ ಎಂದು ಗುರುತಿಸುವುದರ ಜೊತೆಗೆ ‘ಮಾರನಾಯಕನ ಕೋಟೆ’ ಇದ್ದ ಜಾಗವನ್ನು ಗುರುತಿಸುತ್ತಾರೆ. ವಿಶೇಷವೆಂದರೆ ಈಗಲೂ ಆ ಪ್ರದೇಶದಲ್ಲಿ ಹೇರಳವಾಗಿ ರಾಗಿ ಬೀಸುವ ಕಲ್ಲು, ಒರಳು ಕಲ್ಲು, ದೇವಸ್ಥಾನದ ಅವಶೇಷ, ಹತ್ತಾರು ವೀರಗಲ್ಲುಗಳು ಬಿದ್ದಿರುವುದನ್ನು ಕಾಣಬಹುದಾಗಿದೆ. ದುರಂತವೆಂದರೆ ಆ ಗ್ರಾಮದ ಬಗ್ಗೆ ಇತಿಹಾಸದಲ್ಲಿ ಯಾವುದೇ ಸಮಾಧಾನಕರವಾದ ಮಾಹಿತಿಗಳು ಲಭ್ಯವಿಲ್ಲದಿರಿವುದು ಮತ್ತು ಇತಿಹಾಸಕಾರರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು. ಅಲ್ಲದೆ ನಗರೀಕರಣದ ಭರಾಟೆಗೆ ಸಿಲುಕಿ ಸಂಪೂರ್ಣ ಕುರುಹು ಇಲ್ಲದಂತಾಗಿದ್ದು ಈಗಾಗಲೇ ಆ ಪ್ರದೇಶವನ್ನು ಸಮತಟ್ಟು ಮಾಡಿ ನಿವೇಶನಗಳನ್ನಾಗಿ ಮಾಡಲಾಗಿದೆ. ಹಾಗಾಗಿ ಸಾಧ್ಯವಾದಷ್ಟು ಬೇಗ ಅದನ್ನು ದಾಖಲೀಕರಣಗೊಳಿಸುವ ಅವಶ್ಯಕತೆಯಿದೆ.ಹಾಗಾಗಿ ದಯಮಾಡಿ ಆ ಗ್ರಾಮದ ವಿಚಾರಗಳ ಬಗ್ಗೆ ಮಾಹಿತಿಗಳು ದೊರೆತಲ್ಲಿ ನನಗೆ ತಿಳಿಸಿಕೊಡುವ ಮೂಲಕ ನನ್ನ ಸಂಶೋಧನೆಗೆ ಸಹಕರಿಸಬೇಕೆಂದು ಈ ಮೂಲಕ ಕೋರಿಕೊಳ್ಳುತ್ತೇನೆ.ಸಾಧ್ಯವಾದಲ್ಲಿ ಈ ವಿಚಾರವನ್ನು ಕೈಗೆತ್ತಿಕೊಂಡು ನಿಮ್ಮ ಗುಂಪಿನ ಯಾರಾದರೂ ಸಂಶೋಧನೆ ಮಾಡಲು ಮುಂದೆ ಬಂದಲ್ಲಿ ನಾನು ಇದುವರೆಗೂ ಸಂಗ್ರಹಿಸಿರುವ ನನ್ನ ಬಳಿ ಇರುವ ಮಾಹಿತಿಗಳನ್ನು ಅವರೊಂದಿಗೆ ಹಂಚಿಕೊಳ್ಳುವ ಮೂಲಕ, ಅವರ ಸಂಶೋಧನೆಗೆ ಸಂಪೂರ್ಣ ಸಹಕರಿಸಲು ಸಿದ್ಧವಿದ್ದೇನೆ.
  ವಂದನೆಗಳೊಂದಿಗೆ,
  ಪಾಳೇಗಾರ್ ದೀಪಕ್ ಪಿ.ನಾಯಕ್
  ಮೈಸೂರು.

  • ಮಾನ್ಯರೆ, ತಮ್ಮ ಆಸಕ್ತಿ ಅನುಕರಣೀಯವಾದದ್ದು. ಕಳೆದ ವರುಷ ನಡೆದ ಇತಿಹಾಸ ಅಕಾಡೆಮಿಯ ಸಮ್ಮೇಳನದಲ್ಲಿ ಡಾ|| ಟಿ ಎಲ್ ಜಗದೀಶ್, ಸಹಾಯಕ ಪ್ರಾಧ್ಯಾಪಕರು, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು, ದೂರವಾಣಿ: ೯೯೬೪೯೩೩೯೨೦ ಇವರು ಕಾರುಗಹಳ್ಳಿಯ ಬಗ್ಗೆ ಪ್ರಬಂಧ ಮಂಡಿಸಿರುವರು. ದಯವಿಟ್ಟು ಅವರನ್ನು ಸಂಪರ್ಕಿಸಿ.

   • ಮಾನ್ಯರೇ, ನಿಮ್ಮ ಮಾಹಿತಿಗೆ ಧನ್ಯವಾದಗಳು. ನಾನು ನೀವು ಸೂಚಿಸಿದ ಪ್ರಾಧ್ಯಾಪಕರನ್ನು ಸಂಪರ್ಕಿಸಿದ್ದು, ಅವರು ಕಾರುಗಳ್ಳಿಯ ಮೇಲಿನ ತಮ್ಮ ಲೇಖನವನ್ನು ಕೊಡಲು ನಿರಾಕರಿಸಿದ್ದಲ್ಲದೆ, ನಿಮ್ಮ ಬಳಿಯಲ್ಲೆ (ಕರ್ನಾಟಕ ಇತಿಹಾಸ ಅಕಾಡೆಮಿ) ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ದಯಮಾಡಿ ಆ ಲೇಖನ ತಮ್ಮ ಬಳಿಯಲ್ಲಿ ಇದ್ದಲ್ಲಿ ಒದಗಿಸಿಕೊಡಿ.

   • ಮಾನ್ಯ ದೀಪಕ್ ಅವರೆ, ಪ್ರಸ್ತುತವರ್ಷದಲ್ಲಿ ಬಿಡುಗಡೆಯಾದ ಇತಿಹಾಸದರ್ಶನ ಸಂಪುಟದಲ್ಲಿ ಈ ಲೇಖನವಿದೆ. ಪಿಡಿಎಫ್ ಆವೃತ್ತಿ ದೊರೆತ ನಂತರ ಲೇಖನದ ಪ್ರತಿಯನ್ನು ಕಳಿಸುತ್ತೇವೆ.

    ಧನ್ಯವಾದಗಳು

   • ಮಾನ್ಯರೇ, ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು. “ಪ್ರಸ್ತುತವರ್ಷದಲ್ಲಿ ಬಿಡುಗಡೆಯಾದ ಇತಿಹಾಸದರ್ಶನ ಸಂಪುಟದಲ್ಲಿ ಈ ಲೇಖನವಿದೆ, ಪಿಡಿಎಫ್ ಆವೃತ್ತಿ ದೊರೆತ ನಂತರ ಲೇಖನದ ಪ್ರತಿಯನ್ನು ಕಳಿಸುತ್ತೇವೆ” ” ಎಂದು ತಿಳಿಸಿದಿರಷ್ಟೇ.ತೊಂದರೆ ಏನಿಲ್ಲ, ನೀವು ಈ ಪುಸ್ತಕದ ಪ್ರತಿ ದೊರೆಯುವುದು ಎಲ್ಲಿ ಎಂದು ತಿಳಿಸಿದ್ದಲ್ಲಿ ನಾನು ಕೊಂಡುಕೊಳ್ಳಲು ಪ್ರಯತ್ನಿಸುವೆ. ಧನ್ಯವಾದಗಳು.

 2. ಮಾನ್ಯರೆ, ನಿಮ್ಮಿಂದ ಬಹಳ ಉಪಕಾರವಾಯಿತು. ನಿಮ್ಮ ಈ ಪ್ರತ್ಯುತ್ತರದಿಂದ ನನಗೆ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಷ್ಟು ಸಂತೋಷವಾಗುತ್ತಿದೆ. ನನಗೆ ದಾರಿ ತೋರಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು.

  • ಮಾನ್ಯರೇ, ಅನೆಕೆರೆಯ ಬಗ್ಗೆ ಮಾಹಿತಿ:
   ಆನೆಕೆರೆ: ತಾಲ್ಲೂಕು ಕೇಂದ್ರ ಚನ್ನರಾಯಪಟ್ಟಣದಿಂದ 6 ಕಿ.ಮೀ. ದೂರದಲ್ಲಿರುವ ಈ ಊರಿನ ಮಧ್ಯದಲ್ಲಿರುವ ಚನ್ನಕೇಶವ ದೇವಾಲಯವು ಕ್ರಿ.ಶ.1191ರಲ್ಲಿ ರಚಿತವಾಗಿದ್ದು, ಏಕಕೂಟವಾಗಿದೆ. ಎತ್ತರವಾದ ವೇದಿಕೆಯ ಮೇಲಿರುವ ಈ ದೇವಾಲಯವು ಗರ್ಭಗೃಹ, ನವರಂಗ ಮತ್ತು ಅರ್ಧಮಂಟಪವನ್ನು ಹೊಂದಿದೆ. ನವರಂಗದಲ್ಲಿನ ಭುವನೇಶ್ವರಿಯು ಆಕರ್ಷಕವಾಗಿದೆ. ಭುವನೇಶ್ವರಿಯಿಂದ ಕೆಳಕ್ಕೆ ಜೋಲಾಡುತ್ತಿರುವ ದೊಡ್ಡ ಶಂಖವಿದೆ. ದೇವಾಲಯದ ಹೊರಭಿತ್ತಿಯಲ್ಲಿನ ಕೆತ್ತನೆಗಳು ಅಪೂರ್ಣವಾಗಿವೆ. ಪಾಳೆಯಗಾರರ ಕಾಲದಲ್ಲಿ ಭೈರಪ್ಪನಾಯಕ ಎಂಬುವನು ಹೊರಗಿನ ಪ್ರಾಕಾರವನ್ನು ಶುಭಕೃತ್ ಸಂವತ್ಸರದಲ್ಲಿ ಜೀರ್ಣೋದ್ಧಾರ ಮಾಡಿದನು. ಇದೇ ಊರಿನಲ್ಲಿರುವ ಇನ್ನಿತರ ದೇವಾಲಯಗಳಾದ ವೀರಭದ್ರ, ಕೆರೆದಂಡೆ ಮೇಲಿರುವ ಎರಡು ಚಿಕ್ಕ ದೇವಾಲಯಗಳು ಮತ್ತು ಶಂಭುಲಿಂಗೇಶ್ವರ ದೇವಾಲಯಗಳು (೧೨ನೆಯ ಶತಮಾನ) ಹೊಯ್ಸಳರ ಕಾಲದ ರಚನೆಗಳಾಗಿವೆ. ಈ ಊರಿನಲ್ಲಿ ದೊರೆತ ಕ್ರಿ.ಶ.1191ರ ತಾಮ್ರಶಾಸನವು ವೀರಬಲ್ಲಾಳನ ಮಂತ್ರಿ ಶ್ರೀಕರಣ ಹೆಗ್ಗಡೆ ಮಾಚಯ್ಯನು ಈ ಊರನ್ನು ಅಗ್ರಹಾರವನ್ನಾಗಿ ಮಾಡಿದ ವಿಷಯವನ್ನು ಹೊಂದಿದ್ದು, ಈ ಶಾಸನವನ್ನು ಕವಿ ಜನ್ನನು ರಚಿಸಿರುತ್ತಾನೆ. ಆನೆಕೆರೆ ಶಾಸನಗಳು ಎಪಿಗ್ರಾಫಿಯಾ ಕರ್ನಾಟಿಕ 5ನೇ ಸಂಪುಟದಲ್ಲಿ (ಶಾಸನ ಸಂಖ್ಯೆ ೧೭೫-೧೮೦) ದಾಖಲಾಗಿವೆ

 3. OUR VILLAGE BY NAME CHIKKERAHALLI CHITRADURGA DIST MOLAKALMOOR TALUK THEIR WE HAVE TEMPLE WE WOULD LIKE TO KNOW ABOU HISTORY OF STONE OF OUR TEMPLE BUILT IN 300 YEARS BACK.

  • Hello Sir, Here is the information about Doddagadiganahalli jodilingeswara devalaya.
   ತಾಲೂಕು ಕೇಂದ್ರ ಕೃಷ್ಣರಾಜ ಪೇಟೆಯಿಂದ ೧೪ ಕೀ ಮಿ ದೂರವಿದ್ದು , ಅಲ್ಲಿರುವ ಹೊಯ್ಸಳದೊರೆ ವಿಷ್ಣುವರ್ಧನನ ಶಾಸನ ಮತ್ತು ಜೋಡಿಲಿಂಗೇಶ್ವರ ದೇವಾಲಯಗಳಿಂದಾಗಿ ಮಹತ್ವ ಪಡೆದಿದೆ. ದೇವಾಲಯದ ಮುಂದಿರುವ ಶಾಸನವು ಹೊಯ್ಸಳ ವಿಷ್ಣುವರ್ಧನನ ಆಳ್ವಿಕೆಯನ್ನು ಉಲ್ಲೇಖಿಸುತ್ತಾ ವ್ಯಾಪಾರಿಯೊಬ್ಬನನ್ನು ಹೆಸರಿಸುತ್ತಾದರೂ, ಶಾಸನ ಕಲ್ಲು ಹೂತಿರುವುದರಿಂದ ಹೆಚ್ಚಿನ ವಿವರ ಲಭಿಸುವುದಿಲ್ಲ. ಆದರೂ ಇಲ್ಲಿಯ ಈಶ್ವರ ದೇವಾಲಯವನ್ನು ನಿರ್ಮಿಸಿ ಅದಕ್ಕೆದತ್ತಿ ಬಿಟ್ಟ ಶಾಸನವೆಂದು ಊಹಿಸಬಹುದಾಗಿದೆ. ಊರಾಚೆ ಹೊಲದಲ್ಲಿ ಪೂರ್ವಾಭಿಮುಖವಾಗಿರುವ ಈ ಜೋಡಿ ದೇವಾಲಯವು, ಎರಡು ಪ್ರತ್ಯೇಕ ಗರ್ಭಗೃಹ, ತೆರೆದ ಅಂತರಾಳ, ನವರಂಗಗಳನ್ನು ಹೊಂದಿದ್ದು, ಅಕ್ಕಪಕ್ಕದಲ್ಲಿದ್ದರೂ ಹೊಯ್ಸಳ ವಿಷ್ಣುವರ್ಧನನ ರಚನೆಯಾದ ಎಡಭಾಗದ ದೇವಾಲಯವು ಅಚ್ಚುಕಟ್ಟಾಗಿದ್ದು, ನವರಂಗದ ಛತ್ತುಗಳು ಆಕರ್ಷಕವಾಗಿದ್ದರೆ, ಬಲಭಾಗದ ದೇವಾಲಯವನ್ನು ನಂತರದ ಸೇರ್ಪಡೆ ಎಂದು ಊಹಿಸಲು ಸಾಕಷ್ಟು ಕುರುಹುಗಳಿವೆ. ಮೂಲ ಗುಡಿಯ ನವರಂಗದಲ್ಲಿ ನಾಲ್ಕು ಸಪ್ತಮಾತೃಕಾ ಶಿಲ್ಪ, ಎರಡು ಸೂರ್ಯ ಮೂರ್ತಿಗಳೊಂದಿಗೆ ನಂದಿಯೂ ಇದೆ. ನವರಂಗದ ತ್ರಿಶಾಲಾಂಕೃತ ಪ್ರಧಾನ ದ್ವಾರದ ಲಲಾಟದಲ್ಲಿ ಗಜಲಕ್ಷ್ಮಿ ಇದ್ದು, ಮೇಲೆ ಪಂಚ ಶಿಖರಾಲಂಕಾರವಿದೆ. ದೇವಾಲಯದ ಎಡಭಾಗದ ಕಿರುಗುಡಿಯಲ್ಲಿ ಕ್ಷೇತ್ರಪಾಲ ಭೈರವನ ಶಿಲ್ಪವಿದ್ದು, ಹಿಂಭಾಗದಲ್ಲಿ ಕಲ್ಗಾಣವಿದೆ. ಊರ ಒಳಗಿರುವ ಬಸವೇಶ್ವರ ದೇವಾಲಯದಲ್ಲಿ ನಂದಿ ಕಂಬವಿದ್ದು, ದೇವಾಲಯದ ಬಳಿಯಲ್ಲಿ ವಿವಿಧ ಪ್ರಮಾಣದ ಸುಮಾರು 30 ಮತ್ತು ಹರಿಜನರ ಓಣಿಯಲ್ಲಿ ನಾಲ್ಕಾರು ವೀರಗಲ್ಲುಗಳಿವೆ. ಊರಿನ ಹೆಸರಿನಲ್ಲಿ ಗಾಡಿಗ->ಗಾರುಡಿಗ ಇದ್ದಿರಬಹುದು. ಇಂದ್ರಜಾಲ ಅಥವಾ ಮೋಡಿ ಮಾಡುವವರು ಈಗಲೂ ಈ ಊರಿನಲ್ಲಿ ವಾಸಿಸುತ್ತಾರೆ.
   ಮೇಲಿನ ಮಾಹಿತಿಗೆ ಆಕರಗಳು – ಮಂಡ್ಯ ಜಿಲ್ಲೆ ಗೆಜೆಟಿಯರ್, ತೈಲೂರು ವೆಂಕಟಕೃಷ್ಣ ಅವರ ಮಂಡ್ಯ ಜಿಲ್ಲೆಯ ದೇವಾಲಯಗಳು: ಒಂದು ಸಮೀಕ್ಷೆ

 4. ಮಾನ್ಯರೆ ನಮ್ಮ ಊರು ಕಲ್ಕುಣಿ. ಮಳವಳ್ಳಿ.ಮಂಡ್ಯ ಜಿಲ್ಲೆ. ಗ್ರಾಮದಲ್ಲಿ ಸುಮಾರು 5 ಶಾಸನಗಳು ಸುಮಾರು 4೦ ಕ್ಕು ಹೆಚ್ಚು ಶಿಲ್ಪ ಕಲ್ಲುಗಳು ಮುಂತಾದ ಇತಿಹಾಸ ಕುರುಹುಗಳು ಇವೆ ಇವುಗಳ ಬಗ್ಗೆ ಐತಿಹಾಸಿಕ ಮಾಹಿತಿಯನ್ನು ತಿಳಿಸಿಕೊಡಿ….
  ಧನ್ಯವಾದಗಳು…

  • ಮಾನ್ಯರೇ, ತಮ್ಮ ಆಸಕ್ತಿಗೆ ಅಭಿನಂದನೆಗಳು. ಮಂಡ್ಯ ಜಿಲ್ಲೆ ಗೆಜೆಟಿಯರ್ನಲ್ಲಿ ಕಲ್ಕುಣಿಯ ಬಗ್ಗೆ ಈ ಮಾಹಿತಿ ಸಿಗುತ್ತದೆ.

   This is 14 kms west from the taluk centre Malavalli.
   Inscriptions refer to it as ‘Kalkani, Kalkuni, Hiriya Kalukani’ and it was a part of
   Badagarenadu. Among the eight inscriptions of 10th to 16th century reported
   from this place, there are two hero stones of the Ganga period. Among the
   several hero stones and masti stones, hero stone depicting lion hunting is
   significant. A record to the west of Basaveshwara temple dated 1318 A.D. of
   Ballala III, registers a grant of several taxes by Mahapradhana Hariharadeva
   Dandanayaka and all chiefs of Badagarenadu, during the construction of the
   Nageshwara temple at Badagare, the construction caused by a certain Madiraja
   Heggade of Hiriya Kalukani. The Basaveshwara temple (Nageshwara in records)
   at the entrance of the village facing east, houses a Shivalinga in its garbhagriha,
   lotus in its ceiling, small sculpture of Shanmukha in the open antarala and two
   feet tall Ganapa and Mahishamardini sculptures in the devakoshtas of navaranga.
   The navaranga has a side door and its ceiling has lotus decorations. There is a
   perforated window (Jalandra) in the eastern wall of the navaranga. The walls of
   the temple are simple, but the pillars are decorated. In the northern wing of the
   temple are two small temples, one housing a Sun sculpture and the other,
   probably Keshava, a contemporary sculptures of the Nageshwara temple. There
   is a Ravaleshwara sculpture in the Ravaneshwara temple. The Ishwara temple on
   the road to Chikka Kalkuni (Mysore district) is a 16th century construction and
   has a main garbhagriha, antarala, navaranga and a prakara.The garbhagriha has
   a shikhara made out of mortar and houses a Swambhulinga. Old temple
   materials have been used to build the wall of the prakara and a Nandi (made
   out of mortar) is established at the entrance. In a paddy field near the tank bed
   (referred as Balasamudra) on the road to Santemala, is a ruined Hiremanchada
   Kalamma temple. This is a Ganga period structure and has small pillars.
   Initially the temple probably had brick walls. In a nearby small temple are three
   Bhairava sculptures. There are also some new temples such as Anjaneya,
   Mukadevamma, Gowramma, Maramma, Vijayanagareshwari, Lakshmidevamma,
   Machada Kalamma, Hiremanchada Kalamma, Belada Arasamma, Kanne Kaddayya,
   Mokadayya and others in the village. A Jatra is held once in seven years to the
   above nine female deities for nine days during the Navarathri festival and is
   being jointly observed by the people of Kalkuni, Doddegowdana Koppalu,
   Puttegowdana Hundi, Chikkamaalige Koppalu and Chikka Kalkuni.

 5. ಮಾನ್ಯರೇ ನನ್ನ ಹೆಸರು ಮಹೇಶ್ ಕುಮಾರ್.
  ನನ್ನ ಊರು ಕಲ್ಕುಣಿ ,ಮಳವಳ್ಳಿ ತಾಲೂಕು,ಮಂಡ್ಯ ಜಿಲ್ಲೆ..
  ನಮ್ಮ ಊರು ಹೊಯ್ಸಳರ, ಗಂಗರ ಕಾಲದಲ್ಲಿ ಪ್ರತಿಷ್ಟಿತ ಕಲ್ಕುಣಿನಾಡು ಎಂದೂ ಸಂಭೋದಿಸ್ಪಟ್ಟಿದೆ. ಮಾನ್ಯರೆ ಇವೆಲ್ಲಕ್ಕೂ ಮಿಗಿಲಾಗಿ ಉತ್ತಮ ಇತಿಹಾಸ ಹೊಂದಿರಬಹುದು ಎನ್ನುವುದು ನನ್ನ ಭಾವನೆ.ಸುಮಾರು ಅರವತ್ತಕ್ಕು ಹೆಚ್ಚಿನ ವೀರಗಲ್ಲುಗಳು.ಇಪ್ಪತ್ತಕ್ಕು ಹೆಚ್ಚಿನ ದೇವಸ್ಥಾನಗಳು ಹಾಗೂ ನಮ್ಮೂರ ವಿಚಿತ್ರ ಆಚರಣೆ ಇವೆಲ್ಲವೂ ನನ್ನೂರಿನ ಭವ್ಯ ಇತಿಹಾಸದ ಕುರುಹುಗಳೆನಿಸಿ ನನ್ನನ್ನೂ ಚಿಂತೆಗೀಡುಮಾಡಿವೇ ಮಾನ್ಯರೆ ದಯಮಾಡಿ ಇದರ ಸಂಪೂರ್ಣ ಇತಿಹಾಸ ತಿಳಿಸಿಕೊಡಬೇಕಾಗಿ ಮನವಿ….

  ನಿಮ್ಮ : ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ‘ಮಹೇಶ್ ಕಲ್ಕುಣಿ’

  • ಮಾನ್ಯರೇ, ನಿಮ್ಮ ಊರಿನ ಬಗ್ಗೆ ಗೆಜೆಟಿಎರ್ನಲ್ಲಿರುವ ಮಾಹಿತಿ ಮೇಲಿನ ಉತ್ತರದಲ್ಲಿ ಹಾಕಲಾಗಿದೆ. ದಯವಿಟ್ಟು ಗಮನಿಸಿ. ಮತ್ತಷ್ಟು ಮಾಹಿತಿಯನ್ನು ಕೋರಿ ಅಕಾಡೆಮಿಯ ಇತಿಹಾಸಕಾರರನ್ನು ಸಂಪರ್ಕಿಸುತ್ತೇವೆ.

 6. ಮಾನ್ಯರೆ,

  ರಾಯಚೂರು ಜಿಲ್ಲಾ ಕೇಂದ್ರದಿಂದ 105 ಕಿ.ಮೀ, ಸಿಂಧನೂರು ತಾಲೂಕು ಕೇಂದ್ರದಿಂದ 14 ಕಿ.ಮೀ. ಹಾಗೂ ಹೋಬಳಿ ಕೇಂದ್ರ ಸಾಲಗುಂದಾ ಗ್ರಾಮದಿಂದ ಕಿ.ಮೀ. ದೂರದಲ್ಲಿರುವ ಸೋಮಲಾಪುರ ಗ್ರಾಮದ ಕುರಿತು ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s