ಕರ್ನಾಟಕ ಇತಿಹಾಸ ಅಕಾದೆಮಿಯ ಸದಸ್ಯರ ಗಮನಕ್ಕೆ:
ಕರ್ನಾಟಕ ಇತಿಹಾಸ ಅಕಾದೆಮಿಯ ವಾರ್ಷಿಕ ಸಮ್ಮೇಳನವು ಪ್ರಸಕ್ತಸಾಲಿನಲ್ಲಿ ಬಾದಾಮಿಯ ಶಿವಯೋಗ ಮಂದಿರದಲ್ಲಿ ನಡೆಸಲು ನಿಶ್ಚಯಿಸಲಾಗಿದೆ. ದಿನಾಂಕ 26, 27 ಹಾಗೂ 28 ಅಕ್ಟೋಬರ್ 2018 ರಂದು ನಡೆಯಲಿರುವ ಈ ಸಮ್ಮೇಳನದಲ್ಲಿ ಸಂಶೋಧನಾ ಪತ್ರಿಕೆ ಮಂಡಿಸಲು ಇಚ್ಛಿಸುವ ಅಕಾದೆಮಿಯ ಸದಸ್ಯರು ದಿನಾಂಕ 20.9.2018 ಒಳಗೆ ತಮ್ಮ ಸಾರಲೇಖವನ್ನು ಅಕಾದೆಮಿಯ ವಿಳಾಸಕ್ಕೆ (email: karnatakaitihasaacademy25@gmail.com) ಕಳಿಸತಕ್ಕದ್ದು.
ಈ ಸಾರಿಯ ಗೋಷ್ಠಿಗಳನ್ನು ವಿಷಯಾಧಾರಿತವಾಗಿ ವಿಂಗಡಿಸಲಾಗುತ್ತದೆ. ಆದುದರಿಂದ ತಮ್ಮ ವಿಷಯಕ್ಕೆ ಅನುಗುಣವಾಗಿ ಗೊತ್ತುಪಡಿಸಲಾದ ದಿನಾಂಕ ಹಾಗು ಸಮಯದಲ್ಲಿ ಹಾಜರಿದ್ದು ಪತ್ರಿಕೆ ಮಂಡಿಸಬೇಕಾಗಿ ಕೋರಿದೆ.
ಗೋಷ್ಠಿಯ ಪಟ್ಟಿಯನ್ನು ಒಂದು ವಾರ ಮುಂಚಿತವಾಗಿ ಅಕಾದೆಮಿ website ನಲ್ಲಿ ಹಾಗೂ ಈ ಗ್ರೂಪಿನಲ್ಲಿ ಪ್ರಕಟಿಸಲಾಗುವುದು.
ಹೊಸದಾಗಿ ಸದಸ್ಯತ್ವ ಪಡೆದವರಿಗೆ ಪ್ರಸಕ್ತವರ್ಷ ಪತ್ರಿಕೆ ಮಂಡಿಸಲು ಅವಕಾಶ ಇರುವುದಿಲ್ಲ.
ಸಂಶೋಧನಾ ಪತ್ರಿಕೆಗಳ ಗುಣಮಟ್ಟ ಹೆಚ್ಚಿಸುವ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ. ನಿಮ್ಮದೇ ಅಕಾದೆಮಿಯನ್ನು ಶಿಸ್ತಿನಲ್ಲಿ ನಾವೆಲ್ಲಾ ಸೇರಿ ನಡೆಸೋಣ. ಎಲ್ಲರ ಸಹಕಾರ ಅಗತ್ಯ.
ಪ್ರೊ.ದೇವರಾಜಸ್ವಾಮಿ
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ಇತಿಹಾಸ ಅಕಾದೆಮಿ (ರಿ)
Leave a comment