• ನಮ್ಮ ಊರು, ನಮ್ಮ ಇತಿಹಾಸ

  • ನಿಮಗೆ ನಿಮ್ಮ ಊರಿನ ಬಗ್ಗೆ ಹೆಮ್ಮೆ ಇದೆಯೇ?
  • ಅದರ ಚರಿತ್ರೆ, ಇತಿಹಾಸ, ಜನಪದ , ಸಂಸ್ಕೃತಿಯ ಬಗ್ಗೆ ಅರಿವಿದೆಯೇ?
  • ನಿಮ್ಮ ಮನೆತನ, ನಿಮ್ಮ ಹುಟ್ಟೂರು, ನೀವಿರುವ ಊರು, ನಿಮಗಿಷ್ಟವಾದ ಊರಿನ ಬಗ್ಗೆ, ಅದರ ಇತಿಹಾಸ, ಸಂಸ್ಕೃತಿ, ಜನಪದ ಆಚರಣೆಗಳನ್ನು ಹೊರಜನರಿಗೆ ತಿಳಿಯಪಡಿಸುವ ಅಪೇಕ್ಷೆ ಇದೆಯೇ?

  ಹಾಗಾದರೆ, ಇಲ್ಲಿದೆ ಸದಾವಕಾಶ !

  ಕರ್ನಾಟಕ ಇತಿಹಾಸ ಅಕಾಡೆಮಿಯು “ನಮ್ಮ ಊರು, ನಮ್ಮ ಇತಿಹಾಸ” ಎಂಬ ಮಹತ್ವದ ಯೋಜನೆಯನ್ನು ಪ್ರಾರಂಭಿಸಿದೆ. ನಮ್ಮ ನಾಡಿನ ಪ್ರತಿ ಹಳ್ಳಿಯ ಜಾನಪದ, ಸಾಂಸ್ಕೃತಿಕ , ಐತಿಹಾಸಿಕ , ಧಾರ್ಮಿಕ ಮಹತ್ವವನ್ನು ಸಚಿತ್ರ ವಿವರಣೆಗಳೊಂದಿಗೆ ಸಂಯೋಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಜನ ಸಾಮಾನ್ಯರಲ್ಲಿ ತಮ್ಮ ಊರಿನ ಬಗ್ಗೆ ನೆನಪಿರುವ ಕಥೆಗಳು, ಚರಿತ್ರೆ, ತಿಳುವಳಿಕೆಗಳನ್ನು ದಾಖಲಿಸುವ ಪ್ರಯತ್ನ ಇದಾಗಿದೆ. ಕೆಳಗೆ ಕೊಟ್ಟಿರುವ ಅದಷ್ಟೂ ಮಾಹಿತಿಗಳೊಡನೆ ತಮ್ಮ ಲೇಖನವನ್ನು ooru.itihasa@gmail.com  ಇಲ್ಲಿಗೆ ಕಳುಹಿಸಿಕೊಡಿ. ಇಲ್ಲವೇ ಕೆಳಗಿನ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಿಕೊಡಿ.

  ಕರ್ನಾಟಕ ಇತಿಹಾಸ ಅಕಾಡೆಮಿ, ನಂ ೪೩/೧೩, ಮಾತೃ ಕೃಪಾ, ಎರಡೆನೇ ಮಹಡಿ, ೨ನೇ ಮುಖ್ಯ ರಸ್ತೆ, ೫ನೇ ಅಡ್ಡ ರಸ್ತೆ, ಮೌಂಟ್ ಜಾಯ್ ಬಡಾವಣೆ, ಹನುಮಂತ ನಗರ, ಬೆಂಗಳೂರು ೫೬೦೦೧೯

  ೧. ಊರಿನ ಹೆಸರು, ಹೋಬಳಿ, ತಾಲೂಕು, ಜಿಲ್ಲೆ

  ೨.  ತಾಲೂಕು ಕೇಂದ್ರದಿಂದ ದೂರ

  ೩. ಸ್ಥಳ ನಿರ್ದೇಶನ, ಮ್ಯಾಪ್, ಸಾರಿಗೆ ಸಂಪರ್ಕ

  ೪. ಸ್ಥಳೀಯ ಚರಿತ್ರೆ

  ೫. ಐತಿಹ್ಯ

  ೬. ಪುರಾಣದ ಕಥೆ

  ೭. ಜನಪದ ಕಥೆಗಳು

  ೮. ಪ್ರಾಚ್ಯಾವಶೇಷಗಳು (Prehistoric)

  ೯. ದೇವಾಲಯಗಳು, ವಿಗ್ರಹಗಳು

  ೧೦. ದೇವಾಲಯಗಳ ನಕ್ಷೆ, ವಾಸ್ತು

  ೧೧. ಶಾಸನಗಳು

  ೧೨. ವೀರಗಲ್ಲು, ಮಾಸ್ತಿಕಲ್ಲುಗಳು

  ೧೩. ವಸತಿ ವ್ಯವಸ್ತೆ

  ೧೪. ಛಾಯಾ ಚಿತ್ರಗಳು

  ೧೫. ಮಾಹಿತಿ ನೀಡಿದವರ / ಸಂಪನ್ಮೂಲ ವ್ಯಕ್ತಿಗಳ ಹೆಸರು

  ೧೬. ದೂರವಾಣಿ ಸಂಖ್ಯೆ

  ೧೭. ಈ ಮೇಲ್

  ೧೮. ಗ್ರಂಥ ಋಣ , ಟಿಪ್ಪಣಿಗಳು , ಉಲ್ಲೇಖಗಳು , ಅಂತರ್ಜಾಲ ಕೊಂಡಿ

  ಪ್ರತಿ ಲೇಖನವನ್ನು ಅಕಾಡೆಮಿಯ ಇತಿಹಾಸ ತಜ್ಞರು ಪರಿಶೀಲಿಸುತ್ತಾರೆ.  ಮಾಹಿತಿಯ ನಿಖರತೆಯ ಆಧಾರದ ಮೇಲೆ ಲೇಖನಗಳನ್ನು ಆಯ್ಕೆ ಮಾಡಲಾಗುತ್ತದೆ. ಲೇಖಕರ ಹೆಸರನ್ನು ನಮೂದಿಸಲಾಗುತ್ತದೆ.

Leave a comment

If you want to share your opinion, leave a comment.

You may use these HTML tags and attributes:

<a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> 

 • pvkkrishnamurthy says:Reply
  August 15, 2015 at 2:32 pm

  It is difficult to add comments. pl. simplyfy the method.

  • itihasaacademy says:Reply
   August 17, 2015 at 7:36 am

   Sir, this facility is provided by WordPress. Please let me know what difficulty you are facing.

 • pvkkrishnamurthy says:Reply
  August 17, 2015 at 12:45 pm

  ಒಳ್ಳೆಯ ಕೆಲಸ, ಅಗತ್ಯವಾಗಿ ಆಗಬೇಕಾದ್ದು. ವ್ಯವಸ್ಥಿತವಾಗಿ ನಡೆಯಲಿ. ಇದಕ್ಕೆ
  ಇನ್ನೂ ವ್ಯಾಪಕ ಪ್ರಚಾರ ಸಿಗಬೇಕು.
  ವಂದನೆಗಳು,
  ತಮ್ಮ
  ಪಿವಿಕೆ.

  2015-08-15 20:02 GMT+05:30 Krishnamurthy Pv :

  > It is difficult to add comments. pl. simplyfy the method.
  >
  > 2015-08-15 17:04 GMT+05:30 Karnataka Itihasa Academy <

error: Content is protected !!